ನಿನ್ನೆ- ಇಂದು – ನಾಳೆ – ಇಂಗ್ಲಿಷನಲ್ಲಿ

ನಿನ್ನೆ ಶನಿವಾರ (ವಾಗಿತ್ತು)
Yesterday was Saturday.

ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ.
I was at the cinema yesterday.

ಚಿತ್ರ ಸ್ವಾರಸ್ಯಕರವಾಗಿತ್ತು.
The film was interesting.

ಇಂದು ಭಾನುವಾರ.
Today is Sunday.

ಇಂದು ನಾನು ಕೆಲಸ ಮಾಡುವುದಿಲ್ಲ.
I’m not working today.

ನಾನು ಮನೆಯಲ್ಲಿ ಇರುತ್ತೇನೆ.
I’m staying at home.

ನಾಳೆ ಸೋಮವಾರ.
Tomorrow is Monday.

ನಾಳೆ ಪುನಃ ಕೆಲಸ ಮಾಡುತ್ತೇನೆ.
Tomorrow I will work again.

ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ.
I work at an office.

ಅವರು ಯಾರು?
Who is that?

ಅವರು ಪೀಟರ್.
That is Peter.

ಪೀಟರ್ ಒಬ್ಬ ವಿದ್ಯಾರ್ಥಿ.
Peter is a student.

ಅವರು ಯಾರು?
Who is that?

ಅವರು ಮಾರ್ಥ.
That is Martha.

ಅವರು ಕಾರ್ಯದರ್ಶಿ.
Martha is a secretary.

ಪೀಟರ್ ಮತ್ತು ಮಾರ್ಥ ಸ್ನೇಹಿತರು.
Peter and Martha are friends.

ಪೀಟರ್ ಮಾರ್ಥ ಅವರ ಸ್ನೇಹಿತ.
Peter is Martha’s friend.

ಮಾರ್ಥ ಪೀಟರ್ ಅವರ ಸ್ನೇಹಿತೆ.
Martha is Peter’s friend.